ಜಿಲ್ಲಾ ವ್ಯಾಪಾರ ಮಳಿಗೆ

 

ಕೇಂದ್ರ ಮತ್ತು ರಾಜ್ಯ ಸರಕಾರವು ಜಂಟಿಯಾಗಿ ಅನುಷ್ಟಾನಗೊಳಿಸುತ್ತಿರುವ ಸ್ವರ್ಣಜಯಂತಿ ಗ್ರಾಮ  ಸ್ವರೋಜ್‌ಗಾರ್ ಯೋಜನೆಯನ್ವಯ ಪ್ರಾರಂಭಿಸಲಾದ ಸ್ವಸಹಾಯ ಗುಂಪುಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯನ್ವಯ ಪ್ರಾರಂಭಿಸಲಾದ ಸ್ತ್ರೀಶಕ್ತಿ  ಗುಂಪುಗಳು ಹಾಗೂ ಇತರ ಮಹಿಳಾ ಉತ್ಪಾದನಾ ಘಟಕಗಳು ಉತ್ಪಾದಿಸುವ ವಸ್ತುಗಳ ಮಾರಾಟಕ್ಕಾಗಿ ಜಿಲ್ಲಾ ಮಟ್ಟದ 20 ಮಾರಾಟ ಮಳಿಗೆಯನ್ನು ಪಿಲಿಕುಳದಲ್ಲಿ ಸ್ಥಾಪಿಸಲಾಗಿದೆ. ಇವುಗಳಲ್ಲಿ ಸ್ತ್ರೀಶಕ್ತಿ ಗುಂಪುಗಳಿಗೆ ಮತ್ತು ಇತರೆ ಮಹಿಳಾ ಉತ್ಪಾದನಾ ಘಟಕಗಳಿಗೆ ಮಾರಾಟ ಮಳಿಗೆಯನ್ನು ನೀಡಲು ಕ್ರಮಕೈಗೊಳ್ಳಲಾಗಿದೆ. ಈ ಮಳಿಗೆಗಳಲ್ಲಿ ಪ್ರತೀ ವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
×
ABOUT DULT ORGANISATIONAL STRUCTURE PROJECTS