ಸೌಲಭ್ಯಗಳು
ಪ್ರವಾಸಿಗರಿಗಾಗಿ ಸೌಲಭ್ಯಗಳು
 
ಬಾಕ್ಸ್ ಆಫೀಸು: ಪ್ರವಾಸಿಗರಿಗೆ ಸೌಕರ್ಯಗಳನ್ನು ಮಾಡಿಕೊಡುವ ಉದ್ದೇಶದಿಂದ ಪಿಲಿಕುಳದ ಮುಖ್ಯದ್ವಾರದಲ್ಲಿ ಏಕಗವಾಕ್ಷಿ ಟಿಕೆಟ್ ಕೌಂಟರ್ (ಬಾಕ್ಸ್ ಆಫೀಸು) ನ್ನು ತೆರೆಯಲಾಗಿದೆ. ಇದರ ಮುಖೇನ ಎಲ್ಲಾ ಆಕರ್ಷಣೆಗಳಿಗೆ ಒಂದೇ ಕಡೆಯಲ್ಲಿ ಪ್ರವೇಶ ಶುಲ್ಕ ಪಾವತಿಸಿ ಟಿಕೆಟುಗಳನ್ನು ಪಡೆಯಲು ಟೆಕೆಟ್ ಕೌಂಟರ್‌ನ್ನು ತೆರೆಯಲಾಗಿದೆ. ಇದಲ್ಲದೆ ಈ ಬಾಕ್ಸ್ ಆಫೀಸ್‌ನಲ್ಲಿ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಎಟಿಎಂ ಸೌಲಭ್ಯಗಳನ್ನು ಕೂಡಾ ಕಲ್ಪಿಸಲಾಗಿದೆ. ಅಲ್ಲದೆ ಪ್ರತೀ ಆಕರ್ಷಣೆಗೆ ತೆರಳಬೇಕಾಗಿರುವ ಸ್ಥಳದ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಪ್ರವೇಶ ಟಿಕೆಟ್‌ಗಳನ್ನು ಬುಕ್‌ಮೈಶೋ ಆನ್‌ಲೈನ್ ಮುಖಾಂತರ ಪಾವತಿಸಿ ಕಾದಿರಿಸಲು ಅವಕಾಶ ನೀಡಲಾಗಿದೆ. 
ಬ್ಯಾಟರಿ ಚಾಲಿತ ವಾಹನಗಳ ಸೇವೆ: ಪಿಲಿಕುಳದ ಆಕರ್ಷಣೆಗಳು ಬೇರೆ ಬೇರೆ ಕಡೆ ಇದ್ದು ಎಲ್ಲಾ ಆಕರ್ಷಣೆಗಳನ್ನು ವೀಕ್ಷಿಸಲು ಬಹಳ ಕ್ರಮಿಸಬೇಕಾದುದರಿಂದ ಬ್ಯಾಟರಿ ಚಾಲಿತ ವಾಹನಗಳ ಸೇವೆಯನ್ನು ನೀಡಲಾಗುತ್ತಿದೆ. ಪ್ರವಾಸಿಗರು ಮುಖ್ಯದ್ವಾರದ ಟಿಕೆಟ್ ಕೌಂಟರ್‌ನಿಂದ ಎಲ್ಲಾ ಆಕರ್ಷಣೆಗಳಿಗೆ ತೆರಳಿ ವೀಕ್ಷಿಸಿಕೊಂಡು ಹಿಂದಿರುಗಲು ವ್ಯವಸ್ಥೆ ಮಾಡಲಾಗಿದೆ.
ಪಾರ್ಕಿಂಗ್: ಪ್ರವಾಸಿಗರ ವಾಹನಗಳನ್ನು ಮುಖ್ಯದ್ವಾರದ ಬಳಿ ನಿಲುಗಡೆಗೊಳಿಸಲು 30,000 ಚ.ಅಡಿ ವಿಸ್ತಾರದಲ್ಲಿ ಇಂಟರ್‌ಲಾಕ್ ಅಳವಡಿಸಿ ನೆರಳಿಗಾಗಿ ಗಿಡಗಳನ್ನು ನೆಡಲಾಗಿದೆ. ಹಾಗೂ ಇಲ್ಲಿ ಭದ್ರತಾ ವ್ಯವಸ್ಥೆಗಳನ್ನು ಕೂಡಾ ಮಾಡಲಾಗಿದೆ.
ದಾರಿದೀಪಗಳು: ಪಿಲಿಕುಳದ ಮುಖ್ಯದ್ವಾರದಿಂದ ಲೇಕ್‌ಗಾರ್ಡನ್‌ವರೆಗೆ ಮತ್ತು ಆಡಳಿತ ಕಛೇರಿವರೆಗೆ ದಾರಿದೀಪಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ಬೆಂಚುಗಳು: ಪ್ರವಾಸಿಗರ ಅನುಕೂಲತೆಗಾಗಿ ಜೈವಿಕ ಉದ್ಯಾನವನ, ಪ್ರಾದೇಶಿಕ ವಿಜ್ಞಾನ ಕೇಂದ್ರ, ಸಸ್ಯಕಾಶಿ ಮತ್ತು ಸಂಸ್ಕೃತಿ ಗ್ರಾಮ, ಔಷಧೀವನಗಳ ಆಯ್ದ ಸ್ಥಳಗಳಲ್ಲಿ ಬೆಂಚುಗಳನ್ನು ಅಳವಡಿಸಿ ವಿಶ್ರಾಂತಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. 
ಶುದ್ಧ ಕುಡಿಯುವ ನೀರು: ಪ್ರವಾಸಿಗರಿಗೆ ಮತ್ತು ಮೃಗಾಲಯದ ಪ್ರಾಣಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವರು ಶುದ್ಧ ಕುಡಿಯುವ ನೀರಿನ ಘಟಕಕ್ಕಾಗಿ ರೂ. 25.00 ಲಕ್ಷ ಅನುದಾನ ನೀಡಿದ್ದು ಈ ಅನುದಾನದಲ್ಲಿ ಮೇಲ್ಮಟ್ಟದ ಜಲ ಸಂಗ್ರಹಾಗಾರ ಮತ್ತು ವಾಟರ್ ಟ್ರೀಟ್‌ಮೆಂಟ್ ಘಟಕವನ್ನು ಸ್ಥಾಪಿಸಲಾಗಿದೆ. ಮೃಗಾಲಯದಲ್ಲಿ 50,000 ಲೀ. ಸಾಮರ್ಥ್ಯದ ಒಂದು ಮೇಲ್ಮಟ್ಟದ ಜಲಸಂಗ್ರಹಾಗಾರವಿದೆ. ಪಿಲಿಕುಳದ ಎಲ್ಲ ಸಸ್ಯಸಂಕುಲಗಳಿಗೆ ಮತ್ತು ಸಂಸ್ಕೃತಿ ಗ್ರಾಮದ ತೋಟಗಳಿಗೆ ಮಂಗಳೂರು ಮಹಾನಗರಪಾಲಿಕೆಯಿಂದ ನೀಡುವ ಶುದ್ಧೀಕರಿಸಿದ ನೀರನ್ನು ಬಳಸಲಾಗುತ್ತಿದೆ.
ಉಪಾಹಾರ ಗೃಹ: ಪ್ರವಾಸಿಗರ ಸೌಲಭ್ಯಕ್ಕಾಗಿ ಲೇಕ್‌ಗಾರ್ಡನ್‌ಗೆ ಸಾಗುವ ರಸ್ತೆಯ ಅಂಚಿನಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಉಪಹಾರ ಗೃಹವನ್ನು ವ್ಯವಸ್ಥೆ ಮಾಡಿದೆ.
ಆಹಾರ ಸ್ಟಾಲ್‌ಗಳು: ಜೈವಿಕ ಉದ್ಯಾನವನದ ಒಳಗಡೆ ಮೂರು ಮತ್ತು ಲೇಕ್‌ಗಾರ್ಡನ್ ಒಳಗಡೆ ಒಂದು ಸ್ಟಾಲ್ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಒಂದು ಸ್ಟಾಲ್‌ಗಳು ಇದ್ದು ಇಲ್ಲಿ ಸಿದ್ಧಪಡಿಸಿದ ಆಹಾರ ಮತ್ತು ಪಾನೀಯಗಳು ಪ್ರವಾಸಿಗರಿಗೆ ಲಭ್ಯವಿರುತ್ತದೆ.
ಶೌಚಾಲಯ : ಪ್ರವಾಸಿಗರ ಅನುಕೂಲಕ್ಕಾಗಿ ಎಲ್ಲಾ ಆಕರ್ಷಣೆಗಳಲ್ಲಿ ಶೌಚಾಲಯವನ್ನು ನಿರ್ಮಿಸಲಾಗಿದೆ.
ಅತಿಥಿ ಗೃಹ: ಪ್ರವಾಸಿಗರ ವಾಸ್ತವ್ಯದ ಅನುಕೂಲಕ್ಕಾಗಿ ಅತಿಥಿ ಗೃಹದ ಸೌಲಭ್ಯವಿದೆ.
×
ABOUT DULT ORGANISATIONAL STRUCTURE PROJECTS