ಇನ್ನೋವೇಶನ್ ಹಬ್

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆ ಮತ್ತು ರಾಜ್ಯ ಸರಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ, ‘ಆವಿಷ್ಕಾರ ಕೇಂದ್ರ’ (Innovation Hub) ವನ್ನು ಸ್ಥಾಪಿಸಲು ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತಿಯುಳ್ಳ ಕಾಲೇಜು ಹಾಗೂ ಇತರ ವಿದ್ಯಾರ್ಥಿಗಳಿಗೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ, ನವೀನ ತಂತ್ರಜ್ಞಾನಗಳ ಪರಿಚಯ ಅವುಗಳನ್ನು ಉಪಯೋಗಿಸಿ ಹೇಗೆ ಹೊಸ ಅನ್ವೇಷಣೆಗಳನ್ನು ನಡೆಸಬಹುದು ಎಂಬ ಮಾಹಿತಿ, ಮಾರ್ಗದರ್ಶನ, ತಜ್ಞರೊಂದಿಗೆ ಸಮಾಲೋಚನೆ ಸಡೆಸುವ ಅವಕಾಶ, ಪ್ರಯೋಗ ಶಾಲೆಯ ಸೌಲಭ್ಯಗಳು, ಸ್ಥಳೀಯ ಸಮಸ್ಯೆಗಳ ಅಧ್ಯಯನ ಇತ್ಯಾದಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
×
ABOUT DULT ORGANISATIONAL STRUCTURE PROJECTS