ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ

 

ಪಿಲಿಕುಳದಲ್ಲಿ ಪಶ್ಚಿಮ ಘಟ್ಟ ಸಸ್ಯಗಳ ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ ಅನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಪ್ರಾಯೋಜಕತ್ವದ (ರೂ.120.00 ಲಕ್ಷ) ಯೋಜನೆಯಲ್ಲಿ ಸ್ಥಾಪಿಸಲಾಗಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ತಂಡವು ಡಾ. ಸೂರ್ಯಪ್ರಕಾಶ್ ಶೆಣೈ, ಪ್ರಧಾನ ವಿಜ್ಞಾನಿ; ಶ್ರೀ ರಾಮಕೃಷ್ಣ ಮರಾಟಿ, ವೈಜ್ಞಾನಿಕ ಅಧಿಕಾರಿ; ಶ್ರೀಮತಿ ವೀಣಾಕುಮಾರಿ, ಕಿರಿಯ ವೈಜ್ಞಾನಿಕ ಅಧಿಕಾರಿ, ಶ್ರೀಮತಿ ಸ್ವಪ್ನ, ಸಹಾಯಕ ಕ್ಯೂರೇಟರ್ ಮತ್ತು      ಶ್ರೀ ರವಿ, ಕ್ಷೇತ್ರ ಸಹಾಯಕರು ಇವರನ್ನು ಒಳಗೊಂಡಿತ್ತು.
ಹರ್ಬೇರಿಯಂ: ಯೋಜನಾ ಅವಧಿ 2011-18ರ ಅವಧಿಯಲ್ಲಿ ಪಿಲಿಕುಳದ ಸಸ್ಯಸಂಶೋಧನಾ  ತಂಡವು ಕರ್ನಾಟಕ ರಾಜ್ಯದಲ್ಲಿ ಹಾದು ಹೋಗುವ ಪಶ್ಚಿಮ ಘಟ್ಟ ಪ್ರದೇಶದ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅರಣ್ಯ ಪ್ರದೇಶಗಳನ್ನು ಸರ್ವೆ ಮಾಡಿ ಹರ್ಬೇರಿಯಂ ಮಾದರಿಗಳನ್ನು ಸಂಗ್ರಹಿಸಿ ತರಲಾಗಿದೆ. ಹೀಗೆ ತಂದ ಸಸ್ಯ ಮಾದರಿಗಳನ್ನು ಸಂಸ್ಕರಿಸಿ, ಅವುಗಳ ವಿವರದೊಂದಿಗೆ ಹರ್ಬೇರಿಯಂ ಶೀಟುಗಳಿಗೆ ಅಂಟಿಸಿ, ವಿಶೇಷ ಕಪಾಟುಗಳಲ್ಲಿ ಜೋಡಿಸಿ ಇಡಲಾಗಿದೆ.
ಪಿಲಿಕುಳ ಹರ್ಬೇರಿಯಂನಲ್ಲಿ ಒಟ್ಟು 2000 ಪ್ರಭೇದ ಮತ್ತು 194 ಕುಟುಂಬಕ್ಕೆ ಸೇರಿದ 12,850  ಸಸ್ಯ ಮಾದರಿಗಳನ್ನು ಸಂಗ್ರಹಿಸಿ ಇಡಲಾಗಿದೆ. ಇದು ನ್ಯೂಯಾರ್ಕ್ ಬೊಟಾನಿಕಲ್ ಗಾರ್ಡನ್ ಅಧೀನದಲ್ಲಿರುವ ಇಂಡೆಕ್ಸ್ ಹರ್ಬೇರೀಯೋರಂನಲ್ಲಿ ಗುರುತಿಸಲ್ಪಟ್ಟಿದೆ.
ಬೊಟಾನಿಕಲ್ ಮ್ಯೂಸಿಯಂ: ಬೊಟಾನಿಕಲ್ ಮ್ಯೂಸಿಯಂನಲ್ಲಿ ಪಶ್ಚಿಮ ಘಟ್ಟ ಸಸ್ಯಗಳ ಬೀಜಗಳ ಮಾದರಿ, ವಿವಿಧ ಮರಗಳ ಅಡ್ಡ ಮತ್ತು ನೀಳ ಸೀಳಿಕೆಗಳು, ವಿವಿಧ ಮರದ ಹಲಗೆಗಳು, ಆಯುರ್ವೇದಿಕ್ ಔಷಧೀಯ ಮೂಲವಸ್ತುಗಳು, ವಿವಿದ ತಳಿಯ ಭತ್ತದ ಬೀಜ, ಅರಣ್ಯೇತರ ಉತ್ಪನ್ನಗಳು ಮತ್ತು ವಿವಿಧ ಅಪರೂಪದ ಸಸ್ಯಗಳ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಇದು ಕರಾವಳಿ ಕರ್ನಾಟಕದ ಏಕೈಕ ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ ಆಗಿದ್ದು ಸಸ್ಯ ಶಾಸ್ತçಜ್ಞರಿಗೆ, ಸಂಶೋಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಕೇಂದ್ರವಾಗಿ ಹೊರ ಹೊಮ್ಮಿದೆ. ಸಾವಿರಾರು ಪ್ರವಾಸಿಗರು ವರ್ಷಂಪ್ರತಿ ಬೊಟಾನಿಕಲ್ ಮ್ಯೂಸಿಯಂ ಗೆ ಭೇಟಿ ನೀಡುತಿದ್ದಾರೆ. ವಿದ್ಯಾರ್ಥಿಗಳಿಗೆ ಹರ್ಬೇರಿಯಂ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಹರ್ಬೇರಿಯಂ ಮಾದರಿಗಳ ಗುರುತಿನ ಬಗ್ಗೆ ದೃಢೀಕರಣವನ್ನು ಮಾಡಿ ಕೊಡಲಾಗುತ್ತಿದೆ.
×
ABOUT DULT ORGANISATIONAL STRUCTURE PROJECTS