ಲೇಕ್ ಗಾರ್ಡನ್

ಲೇಕ್ ಗಾರ್ಡನ್ ಪಿಲಿಕುಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಸ್ಥಳೀಯ ದಂತಕಥೆಯ ಪ್ರಕಾರ, ಹಿಂದೆ ಈ ಸರೋವರಕ್ಕೆ ಹುಲಿಗಳು ನೀರು ಕುಡಿಯಲು ಬರುತ್ತಿದ್ದವು. ಆದ್ದರಿಂದ ಇದನ್ನು 'ಪಿಲಿಕುಳ' ಅಂದರೆ 'ಹುಲಿ ಕೊಳ' ಎಂದು ಕರೆಯಲಾಯಿತು.
ಪಿಲಿಕುಳ ಯೋಜನೆಗೂ ಮುನ್ನವೇ ಹೂಳು ತುಂಬಿ ನಶಿಸಿಹೋಗುವ  ಹಂತದಲ್ಲಿದ್ದ ಕೆರೆಯನ್ನು ಪಿಲಿಕುಳ ಯೋಜನೆಯಡಿಯಲ್ಲಿ ಪುನರ್ಜೀವನಗೊಳಿಸಲಾಯಿತು.  ಈಗ ಇದು 5.00 ಎಕರೆ ಪ್ರದೇಶದಲ್ಲಿ ಹರಡಿದೆ. ಇದರ ಪ್ರಮುಖ ಪ್ರಯೋಜನವೆಂದರೆ ಅಂತರ್ಜಲ  ಮರುಪೂರಣಗೊಂಡು ಸುತ್ತಮುತ್ತಲಿನ ರೈತರಿಗೆ ಸಾಕಷ್ಟು ಅನುಕೂಲವಾಗಿದೆ.
ಸರೋವರದ ಸುತ್ತಮುತ್ತಲು ಸೊಂಪಾದ ಹಸುರು ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಕೆರೆಯಲ್ಲಿ ದೋಣಿ ವಿಹಾರದ ಸೌಲಭ್ಯವನ್ನು ಕಲ್ಪಿಸಲಾಗಿದೆ.  ಇಂದು ಇದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಕೆರೆಯ ದಡದಲ್ಲಿ ಸಿಹಿನೀರಿನ ಮೀನುಗಳ ಮತ್ಸ್ಯಾಲಯ ನಿರ್ಮಿಸಲಾಗಿದೆ.
 
×
ABOUT DULT ORGANISATIONAL STRUCTURE PROJECTS