ಪರಂಪರಾ ಮಾರಾಟ ಮಳಿಗೆ

ಪಿಲಿಕುಳದ ಕುಶಲಕರ್ಮಿಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒಂದು ಪ್ರಾಮುಖ್ಯ ಅಂಗ. ಕರಕುಶಲ ಉತ್ಪನ್ನಗಳನ್ನು ಮುನ್ನೆಲೆಗೆ ತರುವುದಕ್ಕಾಗಿ ಎರಡು ಮಾರಾಟ ಕೇಂದ್ರಗಳನ್ನು ‘ಪರಂಪರಾ’ ಮಾರುಕಟ್ಟೆ ಮಳಿಗೆ ಎಂಬ ಹೆಸರಿನಲ್ಲಿ ಬಾಕ್ಸ್ ಆಫೀಸ್ ಟಿಕೆಟ್ ಕೌಂಟರ್ ನ ಮುಂಭಾಗ ಹಾಗೂ ಮಂಗಳೂರು ನಗರದ ಹೃದಯ ಭಾಗವಾದ ಕದ್ರಿಯಲ್ಲಿಯಲ್ಲಿ ತೆರೆಯಲಾಗಿದೆ.
ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನ ಮತ್ತು ತರಬೇತಿ ಪಡೆದ ಫಲಾನುಭವಿಗಳು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. 
×
ABOUT DULT ORGANISATIONAL STRUCTURE PROJECTS