ಸಂಸ್ಕೃತಿ ಗ್ರಾಮ

ಕರಾವಳಿ ಜಿಲ್ಲೆಗಳ ಸಂಸ್ಕೃತಿ, ಜನ ಜೀವನ, ಪುರಾತನ ಕಟ್ಟಡ, ಧಾರ್ಮಿಕ ವಿಧಿ ವಿಧಾನ, ತಿಂಡಿ ತಿನಿಸುಗಳು, ಕಂಬಳ, ಯಕ್ಷಗಾನ ಇತ್ಯಾದಿ ಜನಪದ ಕಲೆಗಳನ್ನು ಬಿಂಬಿಸುವ ಒಂದು ವಿನೂತನ ಸಂಸ್ಕೃತಿ ಗ್ರಾಮ ಸುಮಾರು 35 ಎಕರೆ ಪ್ರದೇಶದಲ್ಲಿ ನಿರ್ಮಿಸಿದ್ದು, ಅಳಿದು ಹೋಗುತ್ತಿರುವ ಗ್ರಾಮ್ಯ ಜೀವನದ ನೆನಪುಗಳನ್ನು ಮರಳಿಸುವ ಪ್ರಯತ್ನ ಸಂಸ್ಕೃತಿ ಗ್ರಾಮದಲ್ಲಿ ಸಫಲವಾಗಿದೆ.
ಗುತ್ತು ಮನೆ: ತುಳುನಾಡಿನ ಪುರಾತನ ಕಾಷ್ಠಶಿಲ್ಪದ ಮಾದರಿಯ ಗುತ್ತುಮನೆ ಮತ್ತು ಅದಕ್ಕೆ ಸಂಬಂಧಿಸಿದ ತೆಂಗು, ಕಂಗು, ಬಾಳೆ ತೋಟಗಳು, ಕಂಬಳ ಮತ್ತು ಭತ್ತದ ಗದ್ದೆಗಳನ್ನು ಹಳ್ಳಿಯ ಸೊಗಡಿನಂತೆಯೇ ನಿರ್ಮಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಥಮ ಹಂತದ ಅನುದಾನವಾದ ಜಾನಪದಲೋಕ ಯೋಜನೆಯನ್ನು ಗುತ್ತುಮನೆಯಲ್ಲಿ ಅನುಷ್ಠಾನಗೊಳಿಸಿದ್ದು, ಎಪ್ರಿಲ್- 2016 ರಿಂದ ಗುತ್ತು ಮನೆಯ ಜಾನಪದ ಲೋಕ ವಸ್ತು ಸಂಗ್ರಾಹಾಲಯದ ವೀಕ್ಷಣೆಗೆ ಅವಕಾಶ ಕೊಡಲಾಗಿದೆ. ಇಲ್ಲಿ ಪ್ರತಿವರ್ಷ ಬಿಸುಕಣಿ, ಆಟಿಕೂಟ ಆಚರಣೆಗಳನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ.  

 

ಗುತ್ತುಮನೆ ಫೋಟೋ ಗ್ಯಾಲರಿಗಾಗಿ ಕ್ಲಿಕ್ಕಿಸಿ 

 

×
ABOUT DULT ORGANISATIONAL STRUCTURE PROJECTS