ಆರ್ಬೋರೇಟಮ್ (ಸಸ್ಯೋದ್ಯಾನ)
 
ಪಶ್ಚಿಮ ಘಟ್ಟವನ್ನು ಪ್ರಪಂಚದ ಪರಿಸರ ಹಾಟ್‌ಸ್ಪಾಟ್‌ಗಳಲ್ಲಿ ಒಂದೆಂದು ಗುರುತಿಸಲಾಗಿದೆ. ಮಾನವನ ಆಕ್ರಮಣ ಮತ್ತು ನಗರೀಕರಣದಿಂದಾಗಿ ಪಶ್ಚಿಮ ಘಟ್ಟದ ಹಲವಾರು ಸ್ಥಳೀಯ ಪ್ರಭೇದಗಳು ಈಗ ಅಳಿವಿನಂಚಿನಲ್ಲಿವೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿರುವ ಅಪರೂಪದ, ವಿನಾಶದ ಅಂಚಿನಲ್ಲಿರುವ ಮತ್ತು ಸ್ಥಳೀಯ ಪ್ರಬೇಧಗಳ ಸಸ್ಯಗಳ ಸಂರಕ್ಷಣೆಗಾಗಿ ಪಿಲಿಕುಳದಲ್ಲಿ ‘ಇಂಡೋನಾರ್ವೇಜಿಯನ್ ಎನ್ವಿರಾನ್‌ಮೆಂಟ್ ಪ್ರೋಗ್ರಾಂ’ ಪ್ರಾಯೋಜಕತ್ವದಲ್ಲಿ ಸುಮಾರು 85 ಎಕರೆ ಪ್ರದೇಶದಲ್ಲಿ ಸಸ್ಯಕಾಶಿ (ಬೊಟಾನಿಕಲ್ ಗಾರ್ಡನ್) ಯನ್ನು ನಿರ್ಮಿಸಿದೆ.
ಮುಖ್ಯ ಉದ್ದೇಶಗಳು :
1.ಪಶ್ಚಿಮ ಘಟ್ಟದ ವಿವಿಧ ಜಾತಿಯ ಸಸ್ಯ ಪ್ರಭೇಧಗಳನ್ನು ಸಂರಕ್ಷಿಸುವುದು. ಅಪರೂಪದ ವಿನಾಶದ ಅಂಚಿನಲ್ಲಿರುವ ಮತ್ತು ಔಷಧೀಯ ಸಸ್ಯಗಳು ಇವುಗಳಲ್ಲಿ ಸೇರಿವೆ. ಸುಮಾರು 235 ಜಾತಿಯ ವಿವಿಧ ತಳಿಗಳ 60,000 ಸಸ್ಯಗಳನ್ನು ಒಂದೇ ಕಡೆ ಬೆಳೆಸಿದೆ.

2.ನರ್ಸರಿಯಲ್ಲಿ ಈ ಸಸ್ಯಗಳನ್ನು ಬೆಳೆಸಿ ಆಸಕ್ತರಿಗೆ ವಿತರಿಸುವ ವ್ಯವಸ್ಥೆಯನ್ನು ಮಾಡುವುದು.

3.ಪಿಲಿಕುಳದಲ್ಲಿ ಪರಿಸರ ಸಂರಕ್ಷಣೆ ಕುರಿತಂತೆ ಶಿಕ್ಷಣ ನೀಡುವುದು ಮತ್ತು ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ಪರಿಸರ ಶಿಕ್ಷಣಕ್ಕೆ ಮಾರ್ಗದರ್ಶನ ನೀಡುವುದು.

4.ಸಾರ್ವಜನಿಕರಲ್ಲಿ, ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ, ಜನರು ಪರಿಸರ ಪ್ರೇಮಿಗಳಾಗುವಂತೆ ಪ್ರೋತ್ಸಾಹಿಸುವುದು.
ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಸ್ವಸಹಾಯ ಗುಂಪುಗಳ ಸದಸ್ಯರನ್ನು ಜಾಗೃತಗೊಳಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಪಶ್ಚಿಮ ಘಟ್ಟಗಳ ಅಪರೂಪದ ಅಳಿವಿನಂಚಿನಲ್ಲಿರುವ ಸಸ್ಯಗಳ  ಪ್ರದರ್ಶನಕ್ಕಾಗಿ  ಹಸಿರು ಮನೆ ನಿರ್ಮಿಸಲಾಗಿದೆ. ಪಶ್ಚಿಮ ಘಟ್ಟಗಳ ಅಲಂಕಾರಿಕ ಕಾಡು ಆರ್ಕಿಡ್‌ಗಳನ್ನು ಬೆಳೆಯಲು ಆರ್ಕಿಡಿರಿಯಮ್‌ಗಳನ್ನು ನಿರ್ಮಿಸಲಾಗಿದೆ. 28 ಜಾತಿಯ ಬಿದಿರುಗಳನ್ನು ಹೊಂದಿರುವ ಬಿದಿರಿನವನ್ನು ಅಭಿವೃದ್ಧಿಪಡಿಸಲಾಗಿದೆ. ವಿವಿಧ ಜಾತಿಯ ಬೆತ್ತಗಳನ್ನು ಸಹ ನೆಡಲಾಗಿದೆ.
ಎರೆಹುಳು ಗೊಬ್ಬರ (ವರ್ಮಿ ಕಾಂಪೋಸ್ಟ್ ) ಉತ್ಪಾದನೆ, ಸಾವಯವ ತ್ಯಾಜ್ಯದಿಂದ ಕಾಂಪೋಸ್ಟ್ ತಯಾರಿಕೆ, ಔಷಧೀಯ ಮತ್ತು ಅಲಂಕಾರಿಕ ಸಸ್ಯಗಳನ್ನು ಬೆಳೆಸುವ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುತ್ತಿದೆ.
ಸಸ್ಯಗಳ ಉತ್ಪಾದನೆಗಾಗಿ  ನರ್ಸರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಸ್ಥಾಪಿಸಲಾದ ನರ್ಸರಿ ಆದಾಯದ ಮೂಲವಾಗಿ ಕಾರ್ಯನಿರ್ವಹಿಸುತ್ತಿದೆ. ತೋಟಗಾರಿಕೆ ಮತ್ತು ಮರಗಳನ್ನು ಬೆಳೆಸಲು ಪ್ರೋತ್ಸಾಹಿಸಲು ರಿಯಾಯಿತಿ ದರದಲ್ಲಿ ಸಸ್ಯಗಳನ್ನು ವಿತರಿಸಲಾಗುತ್ತಿದೆ.
 
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
 
 
×
ABOUT DULT ORGANISATIONAL STRUCTURE PROJECTS