ಸ್ವಾಮಿ ವಿವೇಕಾನಂದ 3ಡಿ ತಾರಾಲಯ

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಸ್ಥಾಪಿಸಲ್ಪಟ್ಟಿರುವ ಸ್ವಾಮಿ ವಿವೇಕಾನಂದ ತಾರಾಲಯವು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುದಾನದೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಯ ಮೂಲಕ ಅನುಷ್ಠಾನಗೊಂಡಿದೆ. ರಾಜ್ಯದಲ್ಲೇ ವಿಶಿಷ್ಟ ಪ್ರವಾಸಿ ತಾಣವಾಗಿರುವ ಪಿಲಿಕುಳದಲ್ಲಿ ಸಂದರ್ಶಕರಿಗೆ ಪ್ರಮುಖ ಆಕರ್ಷಣೆಯಾಗಿ ಸೇರ್ಪಡೆಗೊಂಡಿರುವ ಈ ತಾರಾಲಯವು ದಿನಾಂಕ ಮಾರ್ಚ್ 01, 2018ರಂದು ಉದ್ಘಾಟನೆಗೊಂಡು ಕಾರ್ಯಾಚರಿಸುತ್ತಿದೆ. ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಮಾಡಿಕೊಂಡಿರುವ ಈ ತಾರಾಲಯದಲ್ಲಿ 18 ಮೀಟರ್‍ನ ನ್ಯಾನೋ ಸೀಮ್ ಡೋಮ್‍ನ್ನು 15 ಡಿಗ್ರಿ ಕೋನದಲ್ಲಿ ಅಳವಡಿಸಲಾಗಿದ್ದು, ಪ್ರೇಕ್ಷಕರು ಥಿಯೇಟರ್‍ನಲ್ಲಿ ಚಿತ್ರಗಳನ್ನು ವೀಕ್ಷಿಸುವಂತೆ ಪ್ರದರ್ಶನಗಳನ್ನು ನೋಡಬಹುದು. ದೇಶದ ಪ್ರಪ್ರಥಮ ಆ್ಯಕ್ಟಿವ್ 3ಡಿ, 8ಕೆ, ಡಿಜಿಟಲ್ ಹಾಗೂ ಆಪ್ಟೋಮೆಕ್ಯಾನಿಕಲ್ [Opto-mechanical] (ಹೈಬ್ರಿಡ್) ಪ್ರೊಜೆಕ್ಷನ್ ಸಿಸ್ಟಂಗಳನ್ನೊಳಗೊಂಡ ಈ ತಾರಾಲಯದಲ್ಲಿ ಭಾರತದ ಪ್ರಸ್ತುತ ಯಾವುದೇ ತಾರಾಲಯಗಳಲ್ಲಿ ಲಭ್ಯವಿರದ ಉತ್ಕøಷ್ಟ ಗುಣಮಟ್ಟದ ಪ್ರದರ್ಶನಗಳನ್ನು ವೀಕ್ಷಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ವಿಜ್ಞಾನ ಕೇಂದ್ರದ ಚಟುವಟಿಕೆಗಳಿಗೆ ಪೂರಕವಾಗಿ ಪ್ರವಾಸಿಗಳಿಗೆ ಹೊಸ ಅನುಭವ ನೀಡಬಲ್ಲ ತಾಣವಾಗಿ ಶಿಕ್ಷಣಕ್ಕೆ ಹೆಸರುವಾಸಿಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾರಾಲಯ ಸ್ಥಾಪನೆಯಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಈ ಕೊಡುಗೆ ಯುವ ಜನಾಂಗದ ಭವ್ಯ ಭವಿಷ್ಯಕ್ಕೆ ನಾಂದಿ ಬರೆಯಲಿ ಎಂದು ನಮ್ಮ ಆಶಯ.

×
ABOUT DULT ORGANISATIONAL STRUCTURE PROJECTS