ಇತಿಹಾಸ
ಪಿಲಿಕುಳ...ಹೆಸರೇ ಅದರರ್ಥವನ್ನು ಸೂಚಿಸುತ್ತದೆ. ಬಹಳ ಹಿಂದೆ ಹುಲಿಗಳು ಈ ಸ್ಥಳದಲ್ಲಿರುವ ಕೊಳಕ್ಕೆ ನೀರು ಕುಡಿಯಲು ಬರುತ್ತಿದ್ದವು ಎಂಬ ಪ್ರತೀತಿ ಇತ್ತು. ತುಳು ಭಾಷೆಯಲ್ಲಿ ‘ಪಿಲಿ’ ಎಂದರೆ 'ಹುಲಿ' ಮತ್ತು ‘ಕುಳ’ ಎಂದರೆ 'ಕೊಳ'. ಹಾಗಾಗಿ ಈ ಸ್ಥಳಕ್ಕೆ ಪಿಲಿಕುಳ ಅಂತ ಹೆಸರು ಬಂದಿದೆ. ಪಿಲಿಕುಳ ನಿಸರ್ಗಧಾಮವು, ಆಗಿನ ದ.ಕ.ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಭರತ್ ಲಾಲ್ ಮೀನಾ, ಐಎಎಸ್ ಅವರ ಕನಸಿನ ಕೂಸು. ಕರಾವಳಿ ಕರ್ನಾಟಕದ ಜೈವಿಕ ವೈವಿಧ್ಯತೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಪಿಲಿಕುಳ ನಿಸರ್ಗಧಾಮದ ಸ್ಥಾಪಕ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು  18 ವರ್ಷಗಳ ಸೇವೆ ಸಲ್ಲಿಸಿ ಪಿಲಿಕುಳ ನಿಸರ್ಗಧಾಮದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದವರು ಶ್ರೀ ಜೆ.ಆರ್.ಲೋಬೋ, ಕೆ.ಎ.ಎಸ್.
ನಂತರ ಕರ್ನಾಟಕ ಹೈಕೋರ್ಟ್ ಮತ್ತು ಸರ್ಕಾರದ ಆದೇಶದಂತೆ ಪಿಲಿಕುಳ ನಿಸರ್ಗಧಾಮವನ್ನು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಎಂದು ಮರುನಾಮಕರಣ ಮಾಡಲಾಯಿತು. ಈಗ ಅಸ್ತಿತ್ವದಲ್ಲಿರುವ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಸೊಸೈಟಿ ಮತ್ತು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿಯನ್ನು ವಿಸರ್ಜಿಸಲಾಗಿದೆ ಮತ್ತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ, 2018 (ಕರ್ನಾಟಕ ಅಧಿನಿಯಮ 2018 ರ ಕರ್ನಾಟಕ ಅಧಿನಿಯಮ ನಂ.09) ಅನ್ನು ರಾಜ್ಯ ಸರ್ಕಾರವು ಅಧಿಸೂಚನೆ ಸಂಖ್ಯೆ. ಸಾಂವ್ಯಾಶಾಇ 08 ಶಾಸನ 2018, ಬೆಂಗಳೂರು, 209.203 ಮತ್ತು ದಿನಾಂಕ 24.12.2019 ರಿಂದ ಇದು ಜಾರಿಗೆ ಬಂದಿರುತ್ತದೆ.
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಸರ್ಕಾರದ ಪರವಾಗಿ ಪ್ರಾಧಿಕಾರಕ್ಕೆ ಮೇಲ್ವಿಚಾರಣೆ, ನಿಯಂತ್ರಣ ಮತ್ತು ಪ್ರಾಧಿಕಾರಕ್ಕೆ ನಿರ್ದೇಶನಗಳನ್ನು ನೀಡಲು ನೋಡಲ್ ಇಲಾಖೆಯಾಗಿದೆ.
 
×
ABOUT DULT ORGANISATIONAL STRUCTURE PROJECTS